Surprise Me!

News Cafe | 'ಪಿಂಕ್' ಸುಂದರಿಯ ಡಿಮ್ಯಾಂಡ್ ಕಡಿಮೆಯಾಯ್ತ..? | HR Ranganath | May 28, 2022

2022-05-28 25 Dailymotion

ಕಪ್ಪುಹಣಕ್ಕೆ ಬ್ರೇಕ್ ಹಾಕ್ತೇನೆ ಅಂತ ಪಿಂಕ್ ಸುಂದರಿ 2 ಸಾವಿರ ರೂಪಾಯಿ ನೋಟು ಚಲಾವಣೆಗೆ ತರಲಾಯ್ತು. ಆದ್ರೆ, 2000 ರೂಪಾಯಿಗೆ ಚಿಲ್ಲರೆ ಸಿಗೋದೇ ದೊಡ್ಡ ಸಮಸ್ಯೆಯಾಗಿತ್ತು. ಈ ಹೊತ್ತಲ್ಲೇ, 2000 ರೂಪಾಯಿ ನೋಟ್ ಚಲಾವಣೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, 500 ರೂಪಾಯಿ ಮುಖಬೆಲೆಯ ಚಲಾವಣೆ ಹೆಚ್ಚಾಗ್ತಿದೆ. 2020ರಲ್ಲಿ ಶೇ.2.4ರಷ್ಟಿದ್ದ 2 ಸಾವಿರ ರೂಪಾಯಿ ನೋಟಿನ ಚಲಾವಣೆ, 2022ರ ಮಾರ್ಚ್ ಅಂತ್ಯ ವೇಳೆಗೆ ಶೇ.1.6ಕ್ಕೆ ಇಳಿಕೆ ಕಂಡಿದೆ. ಈ ಬಗ್ಗೆ ಆರ್‍ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಈ ವರ್ಷ ಮಾರ್ಚ್ ಅಂತ್ಯÀದವರೆಗೆ ಒಟ್ಟು ಎಲ್ಲ ಮುಖ ಬೆಲೆಯ ಒಟ್ಟು ಕರೆನ್ಸಿ ನೋಟುಗಳ ಸಂಖ್ಯೆ 13,053 ಕೋಟಿಯಷ್ಟಿದೆ. ಕಳೆದ ವರ್ಷ ಇದು 12,437 ಕೋಟಿಯಷ್ಟಿತ್ತು. ಆದರೆ, ಚಲಾವಣೆಯಲ್ಲಿರುವ 2 ಸಾವಿರ ರೂಪಾಯಿ ನೋಟುಗಳ ಸಂಖ್ಯೆ 214 ಕೋಟಿಗೆ ಇಳಿಕೆ ಆಗಿದೆ. ಚಲಾವಣೆಯಲ್ಲಿರುವ ಎಲ್ಲ ಮುಖಬೆಲೆಯ ನೋಟುಗಳ ಪೈಕಿ 2 ಸಾವಿರ ರೂಪಾಯಿ ನೋಟುಗಳ ಪ್ರಮಾಣ ಕೇವಲ ಶೇ.1.6ರಷ್ಟಿದೆ. 2020ರಲ್ಲಿ ಇದರ ಪ್ರಮಾಣ ಶೇ.2.4ರಷ್ಟು ಹಾಗೂ 2021ರಲ್ಲಿ ಶೇ.2ರಷ್ಟಿತ್ತು. ಆದರೆ ಚಲಾವಣೆಯಲ್ಲಿರುವ 500 ರೂಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ 4,554.68 ಕೋಟಿಗೆ ಏರಿಕೆ ಆಗಿದೆ. ಚಲಾವಣೆಯಲ್ಲಿರುವ ಒಟ್ಟು ನಗದಿನ ಪ್ರಮಾಣದಲ್ಲಿ ಶೇ.34.9ರಷ್ಟು ಪಾಲು ಈ 500 ರೂಪಾಯಿ ಹೊಂದಿದೆ. ಭವಿಷ್ಯದಲ್ಲಿ ಡಿಜಿಟಲ್ ಕರೆನ್ಸಿಯನ್ನು ಹಂತ ಹಂತವಾಗಿ ಜಾರಿಗೆ ತರಲು ಆರ್‍ಬಿಐ ಆಲೋಚಿಸಿದೆ.

#HRRanganath #NewsCafe #PublicTV